ಜಾತಿ ಕುರುಬ, ಧರ್ಮ ಹಿಂದೂ ಎಂದೇ ಬರೆಸಿ: ಫಾಲಾಕ್ಷಪ್ಪ
Sep 22 2025, 01:00 AM ISTರಾಜ್ಯದಲ್ಲಿರುವ ಕುರುಬ ಸಮಾಜ ಅತ್ಯಂತ ಹಿಂದುಳಿದ ಸಮುದಾಯವಾಗಿದೆ. ಶೇ.85ರಷ್ಟು ಜನ ಬಡವರು, ಅನಕ್ಷರಸ್ಥರು, ಆರ್ಥಿಕವಾಗಿ ತೀರಾ ಹಿಂದುಳಿದಿದ್ದಾರೆ. ಅವರಿಗೆ ಸಮೀಕ್ಷೆ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಹೀಗಾಗಿ ಅವರು ಜಾತಿಯ ಕಾಲಂ ನಂಬರ್ 9ರಲ್ಲಿ ಕುರುಬ ಎಂದಷ್ಟೇ ಬರೆಸಬೇಕು. ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಬೇಕು ಎಂದು ಕುರುಬ ಸಮಾಜದ ತಾಲೂಕು ಅಧ್ಯಕ್ಷ ಎಂ.ಎಸ್. ಫಾಲಾಕ್ಷಪ್ಪ ಹೇಳಿದ್ದಾರೆ.