ಮಂಗಳೂರು-ಕಾರ್ಕಳ ಹೆದ್ದಾರಿ ಅಭಿವೃದ್ಧಿ: ಸಂಕಷ್ಟ ಸರಮಾಲೆ
May 21 2024, 12:34 AM ISTಭಾನುವಾರ ಮೂಡುಬಿದಿರೆಯಲ್ಲಿ ನಡೆದ ಭೂಮಾಲೀಕರ ಹೋರಾಟ ಸಮಿತಿಯ ಸಭೆಯಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭೂಮಾಲೀಕರು ಪದಾಧಿಕಾರಿಗಳ ಮುಂದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಮಸ್ಯೆಗಳ ಕುರಿತು ಅಳಲನ್ನು ತೋಡಿ ಕೊಂಡರು. ಸರ್ವೇ, ಪರಿಹಾರ ಕಾರ್ಯ ವಿಳಂಬವಾಗುತ್ತಿದೆ. ಗುತ್ತಿಗೆದಾರರ ಕಡೆಯವರು ಪರಿಹಾರ ನೀಡದ ಜಾಗಗಳಲ್ಲಿಯೂ ಬುಲ್ಡೋಜರ್ ತಂದು ಭೂ ಮಾಲೀಕರನ್ನು ದಿಕ್ಕು ತಪ್ಪಿಸಿ ಒತ್ತಡ ಹಾಕುತ್ತಿದ್ದಾರೆ. ಪರಿಹಾರ ಕೊಟ್ಟ ಭೂ ಮಾಲೀಕರಿಗೂ ಸ್ಥಳಾಂತರಕ್ಕೆ ಸಮಯಾವಕಾಶ ನೀಡುತ್ತಿಲ್ಲಎಂದು ಆರೋಪಿಸಿದರು.