ಕಳೆದ ಮೇ 15ರಂದು ಕೋಲ್ಕತಾದಲ್ಲಿ ನಡೆದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನ್ವರ್ ಹತ್ಯೆಗೆ ಹನಿಟ್ರ್ಯಾಪ್ ತಂತ್ರ ಬಳಸಲಾಗಿತ್ತು ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.
ವಿದೇಶಕ್ಕೆ ತೆರಳಿದ ಬಳಿಕ ತಮ್ಮ ರಾಜತಾಂತ್ರಿಕ ಪಾಸ್ಪೋರ್ಟ್ ಅನ್ನು ಮತ್ತೆ ಬಳಸದಿರುವುದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಕುರಿತು ಬ್ಲೂಕಾರ್ನರ್ ನೋಟಿಸ್ಗೆ ಹೊರದೇಶಗಳು ಪ್ರತಿಕ್ರಿಯಿಸದೇ ಇರಲು ಪ್ರಮುಖ ಕಾರಣವಾಗಿದೆ.
ಪಾಂಡವಪುರ ತಾಲೂಕಿನ ಬನಘಟ್ಟ ನಿವಾಸಿ ಧನರಾಜ್ ಅವರಿಗೆ ಸೇರಿದ ಸೂಪರ್ ಮಾರ್ಕೆಟ್ಗೆ ಶುಕ್ರವಾರ ಮುಂಜಾನೆ ಕ್ಯಾಸ್ ಕೌಂಟರ್ ಬಳಿ ಫ್ರಿಜ್ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಕ್ಯಾಸ್ ಕೌಂಟರ್ಗೆ ಬೆಂಕಿ ಕಾಣಿಸಿಕೊಂಡಿದೆ.
ಹೆಗ್ಗಡಹಳ್ಳಿ ಗ್ರಾಮದ ಅಶ್ವಿನಿಗೆ ಒಂದು ವರ್ಷದಿಂದ ಹೊಟ್ಟೆನೋವು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ಹಲವೆಡೆ ಚಿಕಿತ್ಸೆ ಪಡೆದರು ಗುಣಮುಖವಾಗಿರಲಿಲ್ಲ. ಇದರಿಂದ ಖಿನ್ನತೆಗೊಳಗಾಗಿದ್ದಳು. ಹೊಟ್ಟೆನೋವು ಬಾಧೆಗೆ ಬೇಸತ್ತು ಗುರುವಾರ ತಮ್ಮ ಮನೆಯಲ್ಲಿ ವೇಲ್ನಿಂದ ಬಿಗಿದುಕೊಂಡು ಸಾವಿಗೆ ಯತ್ನಿಸಿದ್ದಾಳೆ.
ಅನಿಲ ಸೋರಿಕೆಯಿಂದಾಗಿ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ನಗರದ ಯರಗನಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.