ಕಾರು, ಜೀಪು ಲೈಸೆನ್ಸ್ ಇದ್ದರೆ ಸರಕು ವಾಹನ ಓಡಿಸಬಹುದು!ಕಾರು, ಜೀಪು ಮೊದಲಾದ ಲಘು ಮೋಟಾರು ವಾಹನ (ಎಲ್ಎಂವಿ) ಚಾಲನೆಗೆ ಪರವಾನಗಿ ಹೊಂದಿರುವವರು, 7500 ಕೆಜಿ ತೂಕದವರೆಗಿನ ಸರಕು ಸಾಗಣೆ ವಾಹನಗಳನ್ನು ಯಾವುದೇ ಹೊಸ ಅನುಮತಿ ಇಲ್ಲದೆಯೇ ಚಲಾಯಿಸಬಹುದು ಎಂದು ಸುಪ್ರೀಂಕೋರ್ಟ್ನ ಪಂಚಸದಸ್ಯರ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ.