ಯುಪಿಐನಲ್ಲಿ ಮತ್ತೆ ದೋಷ : ಹಣ ಕಳಿಸಲಾಗದೇ ಭಾರಿ ಸಮಸ್ಯೆ - 15 ದಿನದಲ್ಲಿ 3ನೇ ಸಲ ಈ ತೊಂದರೆತಾಂತ್ರಿಕ ಕಾರಣಗಳಿಂದಾಗಿ ದೇಶಾದ್ಯಂತ ಶನಿವಾರ ಗೂಗಲ್ ಪೇ, ಫೋನ್ ಪೇ, ಭೀಮ್ ಆ್ಯಪ್ನಂಥ ಯುಪಿಐ ಬಳಕೆದಾರರು ಮತ್ತೆ ಸಮಸ್ಯೆ ಎದುರಿಸಿ ತೀವ್ರವಾಗಿ ಪರದಾಡಿದ್ದಾರೆ. ಬೆಳಗ್ಗೆ 11.30 ನಂತರ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಹಣಪಾವತಿಗೆ ಬಳಕೆದಾರರು ಪರದಾಡಬೇಕಾಯಿತು.