ಸಾಲಗಾರಿಗೆ ರಿಲೀಫ್: ಬಡ್ಡಿದರ ಶೇ.0.25ರಷ್ಟು ಇಳಿಕೆಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಸತತ 2ನೇ ದ್ವೈಮಾಸಿಕದಲ್ಲೂ ಬಡ್ಡಿ ದರ ಇಳಿಸಿದ್ದು, ಶೇ.0.25ರಷ್ಟು ಬಡ್ಡಿದರ ಕಡಿತ ಮಾಡಲು ನಿರ್ಧರಿಸಿದೆ. ಇದರಿಂದ ಬಡ್ಡಿ ದರ (ರೆಪೋ ದರ) ಶೇ.6.25ರಿಂದ ಶೇ.6ಕ್ಕೆ ಇಳಿದಿದೆ. ಇದು ಮನೆ, ವಾಹನ ಮತ್ತು ಕಾರ್ಪೊರೇಟ್ ಸಾಲಗಾರರಿಗೆ ನಿರಾಳತೆ ಉಂಟು ಮಾಡಲಿದೆ. ಆದರೆ ಇದೇ ವೇಳೆ ಠೇವಣಿ ಮೇಲಿನ ಬಡ್ಡಿದರಗಳೂ ಕಡಿಮೆ ಆಗಲಿವೆ.