ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಕಲಿ ಎನ್ಸಿಸಿ ಕ್ಯಾಂಪ್ ನಡೆಸಿ 13 ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಈ ಘಟನೆ ಶಾಲಾ ಆಡಳಿತ ಮಂಡಳಿ ಗಮನಕ್ಕೆ ಬಂದರೂ, ಅದನ್ನು ಮುಚ್ಚಿಡಲು ಯತ್ನಿಸಲಾಗಿತ್ತು.
ದೇಶದಲ್ಲಿ ಗಿಗ್ ಕಾರ್ಮಿಕರ ಪರಿಸ್ಥಿತಿ ದುಸ್ತರವಾಗಿದ್ದು, ಉಳಿತಾಯ ಮತ್ತು ಭವಿಷ್ಯದ ಭದ್ರತೆ ಇಲ್ಲದೆ ಬದುಕುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಉಬರ್ ಚಾಲಕನೊಂದಿಗಿನ ಸಂವಾದದ ವಿಡಿಯೋ ಹಂಚಿಕೊಂಡಿರುವ ಅವರು, ಕಾಂಗ್ರೆಸ್ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತದೆ ಎಂದು ಭರವಸೆ ನೀಡಿದ್ದಾರೆ.
‘ಕೇಂದ್ರ ಸರ್ಕಾರವು ನಾಗರಿಕ ಸೇವೆಗಳಿಗೆ ಖಾಸಗಿ ವಲಯದ ವ್ಯಕ್ತಿಗಳನ್ನು ನೇರವಾಗಿ ನೇಮಿಸಿಕೊಳ್ಳುವುದಕ್ಕೆ ಮುಂದಾಗಿರುವುದು ದೇಶ ವಿರೋಧಿ ಹೆಜ್ಜೆಯಾಗಿದೆ. ಮೀಸಲಾತಿಗಳನ್ನು ಕಸಿಯಲು ಐಎಎಸ್ಗಳ ಖಾಸಗೀಕರಣ ಮೋದಿ ಗ್ಯಾರಂಟಿ’ ಎಂದು ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.