ನೀಟ್ ಪ್ರಶ್ನೆಪತ್ರಿಕೆ ಕದ್ದವ ಸೇರಿ ಇಬ್ಬರ ಸೆರೆನೀಟ್-ಯುಜಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ಮಹತ್ವದ ಬೇಟೆ ಆಡಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್ಟಿಎ) ಟ್ರಂಕ್ನಿಂದ ಪ್ರಶ್ನೆಪತ್ರಿಕೆ ಕದ್ದ ಒಬ್ಬ ಆರೋಪಿ ಸೇರಿ ಇಬ್ಬರನ್ನು ಮಂಗಳವಾರ ಬಂಧಿಸಿದೆ. ಬಂಧಿತರನ್ನು ಪಟನಾದ ಎಂಜಿನಿಯರ್ ಪಂಕಜ್ ಕುಮಾರ್ ಹಾಗೂ ಜಾರ್ಖಂಡ್ನ ಹಜಾ಼ರಿಬಾಗ್ ನಿವಾಸಿ ರಾಜು ಸಿಂಗ್ ಎಂದು ಗುರುತಿಸಲಾಗಿದೆ.