ವಿವಿಗಳಲ್ಲಿ ಆರೆಸ್ಸೆಸ್ಸಿಗರ ನೇಮಕ: ರಾಹುಲ್ ಹೇಳಿಕೆಗೆ ಕಿಡಿ ಕೆಲವು ನಿರ್ದಿಷ್ಟ ಸಂಘಟನೆಗಳ ಜೊತೆ (ಆರೆಸ್ಸೆಸ್) ನಂಟು ಹೊಂದಿರುವ ವ್ಯಕ್ತಿಗಳನ್ನೇ ವಿಶ್ವವಿದ್ಯಾಲಯದಲ್ಲಿ ಮಹತ್ವದ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ವಿವಿಧ ವಿವಿಗಳ ಉಪಕುಲಪತಿಗಳು, ಶಿಕ್ಷಣ ತಜ್ಞರು ಕಟುವಾಗಿ ವಿರೋಧಿಸಿದ್ದಾರೆ.