ಅಯೋಧ್ಯೆ ಇನ್ನು ಜಗತ್ತಿನ ಅತಿದೊಡ್ಡ ಪ್ರವಾಸಿ ಕ್ಷೇತ್ರ!ವಾರ್ಷಿಕ 5 ಕೋಟಿ ರಾಮಭಕ್ತರು ಅಯೋಧ್ಯೆಗೆ ಭೇಟಿ ನೀಡುವ ಅಂದಾಜು ಹಾಕಲಾಗಿದೆ. ಪ್ರಸ್ತುತ ತಿರುಪತಿಗೆ 3 ಕೋಟಿ, ಸ್ವರ್ಣ ಮಂದಿರಕ್ಕೆ 3.5 ಕೋಟಿ ಮಂದಿ ಭೇಟಿ ವಾರ್ಷಿಕವಾಗಿ ಭೇಟಿ ನೀಡುತ್ತಿದ್ದಾರೆ. ವ್ಯಾಟಿಕನ್ ಸಿಟಿಗೆ 90 ಲಕ್ಷ, ಮೆಕ್ಕಾಗೆ 2 ಕೋಟಿ ಪ್ರವಾಸಿಗರು ವಾರ್ಷಿಕವಾಗಿ ಭೇಟಿ ನೀಡುತ್ತಿದ್ದಾರೆ.