ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲು ದೇಶದ ಮೂವರು ಶಿಲ್ಪಿಗಳು ಕೆತ್ತಿದ ರಾಮಲಲ್ಲಾ ವಿಗ್ರಹದ ಪೈಕಿ ಮೈಸೂರಿನ ಅರುಣ್ ಅವರು ಕೆತ್ತನೆ ಮಾಡಿದ ವಿಗ್ರಹವೇ ಏಕೆ ಆಯಿತು ಎಂಬುದರ ಕುರಿತು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖಜಾಂಚಿ ಬೆಳಕು ಚೆಲ್ಲಿದ್ದಾರೆ.
ಅಸ್ಸಾಂನಲ್ಲಿ ಭಾರತ್ ಜೊಡೊ ನ್ಯಾಯ ಯಾತ್ರೆ ನಡೆಯುತ್ತಿದ್ದ ವೇಳೆ ಕೆಲವರು ಮೋದಿ ಹಾಗೂ ಜೈಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಬಸ್ನಿಂದ ಕೆಳಗಿಳಿದು ರಾಹುಲ್ ಗಾಂಧಿ ಘೋಷಣೆ ಕೂಗಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಐದು ಶತಕಗಳಿಂದ ಅಸಂಖ್ಯಾತ ಭಕ್ತರು ಕಾಯುತ್ತಿದ್ದ ಹಬ್ಬ ಇಂದು ಅಯೋಧ್ಯೆಯಲ್ಲಿ ನಡೆಯಲಿದ್ದು, ಇಡೀ ವಿಶ್ವವೇ ಇದಕ್ಕಾಗಿ ಕಾತುರದಿಂದ ಕಾಯುತ್ತಿದೆ. ಅಯೋಧ್ಯೆಯ ಪಟ್ಟಣವೇ ಮದುವಣಗಿತ್ತಿಯಂತೆ ಸಿಂಗಾರಗೊಂಡು ಜನರನ್ನು ಮನಸೋರೆಗೊಳಿಸಿದೆ.