30 ಲಕ್ಷ ಬಿಜೆಪಿ ಸದಸ್ಯರಿಂದ ಗಾಂವ್ ಚಲೋ ಅಭಿಯಾನ!ಲೋಕಸಭೆ ಚುನಾವಣೆಗೂ ಮುನ್ನ ಸಮಾಜದ ವಿವಿಧ ವರ್ಗಗಳನ್ನು ತಲುಪಲು ನಾನಾ ಆಂದೋಲನ ರೂಪಿಸುತ್ತಿರುವ ಬಿಜೆಪಿ, ಗ್ರಾಮೀಣ ಪ್ರದೇಶದಲ್ಲಿ ಪ್ರತ್ಯೇಕ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಅದಕ್ಕೆ ‘ಗಾಂವ್ ಚಲೋ’ ಎಂದು ಹೆಸರಿಟ್ಟಿದೆ. ಫೆ.4 ಮತ್ತು 11ರ ನಡುವೆ ಈ ಅಭಿಯಾನ ನಡೆಯಲಿದೆ.