ಮಾಧವಾನಂದ ಪ್ರಭುಗಳ ಮಾತಿಗೆ ಕದ್ದಿಮನಿ ಕಟ್ಟಿಬದ್ಧರುಇಂಚಗೇರಿ ಸಂಪ್ರದಾಯ ಮತ್ತು ಮಾಧವಾನಂದ ಪ್ರಭುಗಳ ಮಾತು ಉಳಿಸುವುದಕ್ಕಾಗಿ ತಮ್ಮ ಜೀವನದುದ್ದಕ್ಕೂ ಸಂಕಷ್ಟದ ಹಾದಿಯಲ್ಲಿಯೇ ನಡೆದುಕೊಂಡು, ಕಡೆಗೊಂದು ದಿನ ಜನರ ಸಹಕಾರದಿಂದ ಇಲ್ಲಿನ ಗಿರಿಮಲ್ಲೇಶ್ವರ ಆಶ್ರಮ ಕಟ್ಟಿ ಗಿರಿಮಲ್ಲೇಶ್ವರ ಮತ್ತು ಮಾಧವಾನಂದರ ನಿತ್ಯ ಪೂಜೆ, ಭಜನೆ, ಆರತಿ ನಡೆಯುವುದಕ್ಕೆ ಕಾರಣವಾದವರೆ ದಿ.ಸಂಗಪ್ಪ ಕದ್ದಿಮನಿ ಮಹಾರಾಜರಾಗಿದ್ದಾರೆ. ಮಾಧವಾನಂದ ಪ್ರಭುಜಿಯವರ ಪರಮ ಭಕ್ತರಾಗಿದ್ದ ಸಂಗಪ್ಪರಿಗೆ ಗುರುವಿನ ಆಶೀರ್ವಾದ ಇದ್ದುದರಿಂದಲೇ ಇಂದು ಅವರ ಪುಣ್ಯರಾಧನೆ ನಡೆಯುವುದೇ ಸಾಕ್ಷಿ ಎಂದು ಸ್ಥಳೀಯ ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಪ.ಪೂ.ಸಹಜಾನಂದ ಸ್ವಾಮೀಜಿ ನುಡಿದರು.