ಜಿಲ್ಲೆಯಾದ್ಯಂತ ಸಡಗರದ ದಸರಾ ಉತ್ಸವಕನ್ನಡಪ್ರಭ ವಾರ್ತೆ ತೇರದಾಳ(ರ-ಬ) ನಾಡಹಬ್ಬ ದಸರಾ ಉತ್ಸವ ನಿಮಿತ್ತ ಘಟಸ್ಥಾಪನೆ, ದೇವಿ ಆರಾಧನೆ, ಮೌನಾನುಷ್ಠಾನ, ದೇವಿ ಪುರಾಣ, ಅಲಂಕಾರಿಕ ಪೂಜೆಗಳು, ವೃತಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಪಟ್ಟಣದ ಕಲ್ಲಟ್ಟಿ ಗಲ್ಲಿ ಆದಿಶಕ್ತಿ ತರುಣ ಮಂಡಳಿಯವರು ಪ್ರತಿಷ್ಠಾಪಿಸಿದ ಆದಿಶಕ್ತಿದೇವಿ ಮೂರ್ತಿ ಸಂಭ್ರಮ ೨೬ನೇ ವರ್ಷದಲ್ಲಿ ಅದ್ಧೂರಿ ಕಾರ್ಯಕ್ರಮಗಳು ಜರುಗಿದವು. ರಂಗೋಲಿ ಸ್ಪರ್ಧೆ, ಓಟದ ಸ್ಪರ್ಧೆ, ಮ್ಯೂಸಿಕಲ್ ಚೇರ್, ಹಗ್ಗ ಜಗ್ಗುವ ಸ್ಪರ್ಧೆ, ನೃತ್ಯ ಸ್ಪರ್ಧೆ ಹಾಗೂ ಹೋಮ, ಉಡಿತುಂಬುವ ಮಹಾಪ್ರಸಾದ ವಿತರಣೆ, ಪೂಜಾ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು.