ಮಾತೃಭಾಷೆ ನಮ್ಮ ಉಸಿರಾಗಿರಬೇಕು: ಶಾಸಕ ಸಿದ್ದುಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ಮಾತೃಭಾಷೆ ನಮ್ಮ ಸಂಸ್ಕೃತಿಯ ಮೂಲ ಸ್ತೋತ್ರವಾಗಿದ್ದು, ಕನ್ನಡ ನಮ್ಮ ಉಸಿರಾಗಬೇಕು ಎಂದು ಶಾಸಕ ಸಿದ್ದು ಸವದಿ ನುಡಿದರು. ತೇರದಾಳದಿಂದ ರಬಕವಿ-ಬನಹಟ್ಟಿಗೆ ಬಂದ ಕನ್ನಡ ರಥಕ್ಕೆ ರಬಕವಿ ಹೊಸ ಬಸ್ ನಿಲ್ದಾಣದ ಬಳಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಾವು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ನಮ್ಮ ಮಾತೃಭಾಷೆಯನ್ನು ಮರೆಯದೇ ಬಳಸಬೇಕು. ನಮ್ಮ ನೆಲ, ಜಲ ಮತ್ತು ಭಾಷೆಗೆ ಅಭಿಮಾನದ ಗೌರವ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.