ಗುಮ್ಮಟ ಗಲ್ಲಿಯ ಭಕ್ತಾದಿಗಳು ಇತರರಿಗೂ ಮಾದರಿತೇರದಾಳ(ರ-ಬ) ಪಟ್ಟಣದ ಗುಮ್ಮಟ ಗಲ್ಲಿಯ ಭಕ್ತಾದಿಗಳು ಇತರರಿಗೆ ಮಾದರಿಯಾಗಿದ್ದಾರೆ. ಬಸವ ಪುರಾಣ ನಡೆದಾಗ ಅ.೨೧ರಂದು ಒಂದು ದಿನ ಎಲ್ಲರಿಗೂ ಹೋಳಿಗೆ-ತುಪ್ಪ ಊಟದ ವ್ಯವಸ್ಥೆ ಮಾಡುವುದಲ್ಲದೇ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮಕ್ಕಾಗಿ ₹೨೦೧೧೦೦ಗಳನ್ನು ಸಂಗ್ರಹಿಸಿ ನಮಗೆ ಕೊಟ್ಟಿರುವುದು ಅಭಿನಂದನಾರ್ಹವಾಗಿದೆ ಎಂದು ಅಲ್ಲಮಪ್ರಭು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಜಮಖಂಡಿ ಶಾಸಕ, ನಾಡೋಜ ಜಗದೀಶ ಗುಡಗುಂಟಿಮಠ ಹೇಳಿದರು.