ನೆಲಕಚ್ಚಿದ ನೇಕಾರಿಕೆಗೆ ಬಲ ತುಂಬುವರೆ ಸಿಎಂಮಾರುಕಟ್ಟೆಯಲ್ಲಿ ಸೀರೆ ಮಾರಾಟ ಕುಸಿತ, ಮತ್ತೊಂದೆಡೆ ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಸಂಕಷ್ಟದಲ್ಲಿ ನರಳುತ್ತಿರುವ ಜಿಲ್ಲೆಯ ಲಕ್ಷಾಂತರ ನೇಕಾರರು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಲಿರುವ ಬಜೆಟ್‌ನತ್ತ ಆಸೆಗಣ್ಣಿನಿಂದ ನೋಡುತ್ತಿದ್ದು, ಉದ್ಯಮ ಚೇತರಿಕೆಗೆ ಅಗತ್ಯ ಸಹಾಯ ದೊರೆತು ಸಂಕಷ್ಟ ನಿವಾರಣೆಯಾಗುವ ಆಶಾಭಾವದಲ್ಲಿದ್ದಾರೆ.