ವಿದ್ಯಾರ್ಥಿನಿ ವೈದ್ಯ ಶಿಕ್ಷಣಕ್ಕೆ ವಾಟ್ಸಪ್ ಗ್ರೂಪ್ ನೆರವು!ಬಡತನದಲ್ಲಿ ಬೆಳೆದು ಉತ್ತಮ ಶಿಕ್ಷಣ, ರ್ಯಾಂಕ್ ಪಡೆದು ವೈದ್ಯಕೀಯ ಸೀಟು ಪಡೆದ ವಿದ್ಯಾರ್ಥಿನಿಗೆ ನೆರವು ನೀಡುವಂತೆ ವಾಟ್ಸಪ್ ಗ್ರೂಪ್ನಲ್ಲಿ ಕೇಳಿದ ಆರು ಗಂಟೆಗಳಲ್ಲಿ ನೆರವಿನ ಹಸ್ತವೇ ಹರಿದುಬಂದಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯ ಸೃಷ್ಟಿ ಸದಾಶಿವ ಕೊಕಟನೂರಗೆ 2700 ಕಿಮೀಗೂ ಅಧಿಕ ದೂರದಲ್ಲಿರುವ ಅಸ್ಸಾಂನ ಗುವಾಹಟಿಯಿಂದ ಕಾರು ಶೋರೂಂನ ಮಾಲೀಕರಾದ ಅನೂಪ್ ಪೋದ್ದಾರ ಮತ್ತು ಅವರ ಪತ್ನಿ ಕಾಂಚನಾ ಪೋದ್ದಾರ ಅವರು ಸೃಷ್ಟಿಗೆ ಸಹಾಯ ಮಾಡಿದ್ದಾರೆ.