ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹಗುಳೇದಗುಡ್ಡ: ತಾಲೂಕಿನ ಕೋಟೆಕಲ್ ಗ್ರಾಮದಿಂದ ನೀಲಾನಗರ ಮಾರ್ಗವಾಗಿ ಜಿಲ್ಲಾ ಕೇಂದ್ರಕ್ಕೆ ಹೋಗುವ ಸುಮಾರು 5 ಕಿ.ಮೀ. ರಸ್ತೆ ಸಾಕಷ್ಟು ಹದಗೆಟ್ಟಿದೆ. ಕೂಡಲೇ ಅದನ್ನು ದುರಸ್ತಿ ಮಾಡಬೇಕೆಂದು ಗ್ರಾಮಸ್ಥರು ಹಾಗೂ ಪ್ರಯಾಣಿಕರು ಸಂಬಂಧಪಟ್ಟ ಇಲಾಖೆಯನ್ನು ಆಗ್ರಹಿಸಿದ್ದಾರೆ. ಕೋಟೆಕಲ್ ಮಾರ್ಗದ ಮೂಲಕ ಹೋಗುವ ರಸ್ತೆಯು ಲಿಂಗಾಪುರ, ಕೆಲವಡಿ, ಬಾಗಲಕೋಟೆ, ನೀಲಾನಗರ, ಶಿರೂರ, ಮಲ್ಲಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹಲವಾರು ಗ್ರಾಮದ ಜನ ಇದೇ ಮಾರ್ಗದ ಮೂಲಕ ಬಾಗಲಕೋಟೆಗೆ ಹೋಗುತ್ತಾರೆ.