ಹಂಪಿಯಲ್ಲಿ ಪಿತೃಗಳಿಗೆ ತರ್ಪಣ ಕಾರ್ಯಹಂಪಿಯ ತುಂಗಭದ್ರಾ ನದಿ ತಟದಲ್ಲಿ ಶನಿವಾರ ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪಿತೃಗಳಿಗೆ ತರ್ಪಣ ನೀಡಲಾಯಿತು. ಐತಿಹಾಸಿಕ ಹಂಪಿಯ ತುಂಗಭದ್ರಾ ತಟದಲ್ಲಿ ಕುಟುಂಬ ಸಮೇತರಾಗಿ ಬಂದು ಹಿರಿಯರಿಗೆ ವಸ್ತ್ರ ಸಮರ್ಪಣೆ, ತರ್ಪಣಾದಿಗಳನ್ನು ನೀಡುವುದು ಹಿಂದೂ ಧರ್ಮದ ಭಾಗವಾಗಿದೆ.