ಬೇಸಿಗೆ ನೀರು ನಿರ್ವಹಣೆಗೆ ಬಾವಿ-ಬೋರ್‌ವೆಲ್‌ಗಳ ಮೊರೆ ಹೋದ ಪಾಲಿಕೆನಗರದ ವಿವಿಧ ಪ್ರದೇಶಗಳಲ್ಲಿರುವ 13 ಬಾವಿಗಳನ್ನು ಸ್ವಚ್ಛಗೊಳಿಸಿ, ಸಾರ್ವಜನಿಕರಿಗೆ ಬಳಕೆಗೆ ನೀಡಲು ಪಾಲಿಕೆ ನಿರ್ಧರಿಸಿದೆ. ಬಾವಿಯಲ್ಲಿರುವ ತ್ಯಾಜ್ಯ ಹೊರ ಹಾಕಿ, ನೀರು ತೆರವುಗೊಳಿಸಲಾಗುವುದು. ಬಳಿಕ ನೀರನ್ನು ಪರೀಕ್ಷೆಗೆ ಕಳಿಸಿ ಬಳಕೆಗೆ ಸೂಕ್ತವಿದೆ ಎಂದು ವರದಿ ಬರುತ್ತಿದ್ದಂತೆಯೇ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು