ಕುಂಚ ನಮ್ಮದು-ಬಣ್ಣ ನಿಮ್ಮದು ಗುಂಪಿನ ಕಾರ್ಯ ಶ್ಲಾಘನೀಯರಾಜ್ಯದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಉಚಿತವಾಗಿ ಬಣ್ಣ ಹಚ್ಚುವುದರ ಮೂಲಕ ಕನ್ನಡ ಶಾಲೆಗಳ ಉಳಿವು, ಬೆಳವಣಿಗೆಗಾಗಿ ಕ್ರಿಯಾಶೀಲರಾಗಿರುವ ಕುಂಚ ನಮ್ಮದು-ಬಣ್ಣ ನಿಮ್ಮದು ಗುಂಪಿನ ಕನ್ನಡಿಗ, ಕನ್ನಡತಿಯರ ಕಾರ್ಯ ಶ್ಲಾಘನೀಯವಾದುದು ಎಂದು ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ಸಂತಸ ವ್ಯಕ್ತಪಡಿಸಿದರು.