ಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಹೇಳಲಿಕ್ಕೆ ಅವಕಾಶವಿಲ್ಲಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಹೇಳಲಿಕ್ಕೆ ಅವಕಾಶವಿರುವುದಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸತ್ಯ ಹೇಳಲಿಕ್ಕೆ ಅವಕಾಶ ನೀಡಬೇಕು. ಸಹಕಾರ ಸಚಿವ ರಾಜಣ್ಣನವರನ್ನು ಯಾವುದೇ ಕಾರಣ ನೀಡದೇ ರಾಜಿನಾಮೆಗೂ ಅವಕಾಶ ನೀಡದೇ ಸಂಪುಟದಿಂದ ವಜಾ ಮಾಡಿರುವುದು ಪರಿಶಿಷ್ಟ ಸಮೂದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು.