ಸ್ಥವನಿಧಿ ಬಳಿ ಗುಡ್ಡದ ಮೇಲೆ 10 ಎಕರೆ ಸ್ಥಳ ಖರೀದಿಅಂಬೇಡ್ಕರ್ ಅವರು ನಿಪ್ಪಾಣಿ ನಗರಕ್ಕೆ ಬಂದ ಸಮಯದಲ್ಲಿ ವಾಯು ವಿವಾಹರಕ್ಕೆ ಹೋದ ಸ್ಥವನಿಧಿ ಬಳಿ ಇರುವ ಗುಡ್ಡದ ಮೇಲೆ 10 ಎಕರೆ ಸ್ಥಳ ಖರೀದಿ ಮಾಡಿದ್ದು, ಇಲ್ಲಿ ಅಶ್ವರೂಢ ಅಂಬೇಡ್ಕರ್ ಮೂರ್ತಿಪ್ರತಿಷ್ಠಾಪನೆ, ಕ್ರಾಂತಿಸ್ಥಂಭ, ಬೌದ್ಧ, ಮ್ಯೂಜಿಯಂ, ಬಡವರಿಗೆ ಈ ಲೈಬ್ರರಿ ಹಾಗೂ ಸಭಾಭವನ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ₹1.20 ಕೋಟಿಗಳ ಅನುದಾನ ಈಗಾಗಲೇ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿದೆ. ನಾನು ನನ್ನ ಶಾಸಕರ ಅನುದಾನದಲ್ಲಿ ₹1 ಕೋಟಿಗಳ ಅನುದಾನ ನೀಡಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ ಎಂದು ಮಾಜಿ ಸಚಿವೆ, ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.