ಋಷಿ ಮುನಿಗಳ ಆಹಾರ, ವಿಹಾರ, ಜೀವನ ಪದ್ಧತಿ ಆದರ್ಶವಾಗಲಿಇಂದಿನ ಒತ್ತಡದ ಬದುಕಿನಲ್ಲಿ ಮಾನವ ನಿತ್ಯ ಕಲುಷಿತ ಆಹಾರ, ನೀರು, ಗಾಳಿ, ಸೇವನೆ ಜೊತೆಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಸಿಯುತ್ತಿದ್ದಾನೆ. ಹಿಂದಿನ ಋಷಿ ಮುನಿಗಳ ಆಹಾರ, ವಿಹಾರ, ಜೀವನ ಪದ್ಧತಿ ನಮಗೆ ಆದರ್ಶವಾಗಬೇಕು. ನಮ್ಮ ಆರೋಗ್ಯ ಪೂರ್ಣ ಬದುಕಿಗೆ ದೈಹಿಕ ವ್ಯಾಯಾಮ, ಯೋಗಾಸನ, ಧ್ಯಾನ, ಒಳ್ಳೆಯ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದು ಸಹಕಾರಿಯಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.