ಪ್ರಯೋಗಾಲಯದಲ್ಲಿ ಸಮಾಜ ವಿಜ್ಞಾನ ಕಲಿಸುವ ರಾಜಶೇಖರ ಮೇಷ್ಟ್ರುಪ್ರಾಯೋಗಿಕ ಕಲಿಕೆ ಕೇವಲ ವಿಜ್ಞಾನ, ಗಣಿತ ವಿಷಯಕ್ಕೆ ಮಾತ್ರ. ಏಕೆಂದರೆ ಈ ವಿಷಯಗಳ ಪ್ರಯೋಗಕ್ಕೆ ಪ್ರಯೋಗಾಲಯ ಇರುವುದು. ಆದರೆ, ಸಮಾಜ ವಿಜ್ಞಾನ ವಿಷಯವನ್ನು ಕೂಡ ಪ್ರಾಯೋಗಿಕವಾಗಿ ಕಲಿಸಬಹುದು ಎನ್ನುವುದಕ್ಕೆ ಪ್ರಯೋಗಾಲಯ ನಿರ್ಮಿಸುವ ಮೂಲಕ ಜಿಲ್ಲೆಯಲ್ಲಿಯೇ ಪ್ರಪ್ರಥಮ ಸಮಾಜ ವಿಜ್ಞಾನ ಪ್ರಯೋಗಾಲಯ ಸೃಷ್ಟಿಸಿ ರಾಜ್ಯದ ಗಮನ ಸೆಳೆದಿದ್ದಾರೆ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ರಾಜಶೇಖರ ಕ.ರಗಟಿ ಅವರು. ಹೀಗಾಗಿ ಅವರಿಗೆ ಈ ಬಾರಿಯ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪುರಸ್ಕಾರ ಕೂಡ ಲಭಿಸಿದೆ.