ದೇಹತ್ಯಾಗ ಮಾಡುತ್ತಿದ್ದ ಕುಟುಂಬದವರ ಮನವೊಲಿಸಿದ ಅಧಿಕಾರಿಗಳುಬಾಬಾರವರ ಆಧ್ಯಾತ್ಮಿಕದತ್ತ ಒಲವು ಹೊಂದಿದ್ದ ಕುಟುಂಬವೊಂದು ಸೆ.8 ರಂದು ದೇಹತ್ಯಾಗ ಮಾಡುವ ನಿರ್ಧಾರ ಮಾಡಿತ್ತು. ನಂತರ ಈ ವಿಷಯ ತಿಳಿದು ತಾಲೂಕು ಆಡಳಿತ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಅನಂತಪುರದ ಈರಕರ ಅವರ ನಿವಾಸಕ್ಕೆ ತೆರಳಿ ಮನವೊಲಿಸುವಲ್ಲಿ ಯಶಸ್ವಿಯಾಯಿತು.