ಜೀವನದ ಪರೀಕ್ಷೆಗೆ ಪಠ್ಯೇತರ ಶಿಕ್ಷಣವೇ ಶ್ರೀರಕ್ಷೆಕನ್ನಡಪ್ರಭ ವಾರ್ತೆ ಬೆಳಗಾವಿಶಾಲಾ ಕಾಲೇಜುಗಳ ಪಠ್ಯವು ಕೇವಲ ಅಂಕಗಳನ್ನು ಮಾತ್ರ ನೀಡುತ್ತದೆ. ಜೀವನದಲ್ಲಿ ಎದುರಾಗುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಬಹಿರಂಗ (ಲೀಕ್) ಆಗುವುದಿಲ್ಲ. ಆದರೆ, ಜೀವನದ ಆ ಪರೀಕ್ಷೆಗಳಿಗೆ ಶಾಲಾ ಕಾಲೇಜುಗಳ ಪಠ್ಯೇತರ ಶಿಕ್ಷಣವೇ ಶ್ರೀರಕ್ಷೆಯಾಗಿದೆ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.