ಸಹಾಯಕ ಗ್ರಂಥಪಾಲಕ ಹುದ್ದೆ ಅರ್ಜಿ ಆಹ್ವಾನದಲ್ಲಿ ತಾರತಮ್ಯಸಾರ್ವಜನಿಕ ಗ್ರಂಥಾಯ ಇಲಾಖೆಯಲ್ಲಿ ಸಹಾಯಕ ಗ್ರಂಥಪಾಲಕ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಅರ್ಜಿಗಳನ್ನು ಆಹ್ವಾನಿಸಿರುವ ಹುದ್ದೆಗಳ ಅರ್ಹತಾ ಮಾನದಂಡದಲ್ಲಿ ತಾರತಮ್ಯವಾಗಿದ್ದು, ಸೂಕ್ತ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಲು ಆಗ್ರಹಿಸಿ ಕೆಪಿಎಸ್‌ಸಿ ಕಚೇರಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ ಹಾಗೂ ಸದಸ್ಯರಾದ ಬಿ.ವಿ.ಗೀತಾ ಅವರಿಗೆ ಬೆಂಗಳೂರಿನ ಎಲ್ಐಎಸ್ ಅಕಾಡೆಮಿಯ ಅಧ್ಯಕ್ಷ ಡಾ.ಪಿ.ವಿ.ಕೊಣ್ಣೂರ ಶುಕ್ರವಾರ ಮನವಿ ಸಲ್ಲಿಸಿದರು.