ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದ ಸಾವಿತ್ರಿಗೆ ಸನ್ಮಾನಐಗಳಿ: ಸಮೀಪದ ಕಕಮರಿ ಗ್ರಾಮದ ಸದ್ಗುರು ರಾಯಲಿಂಗೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಾವಿತ್ರಿ ಮಲ್ಲಿಕಾರ್ಜುನ ಮೈಗೂರ 592 ಅಂಕ ಪಡೆದು ರಾಜ್ಯಕ್ಕೆ 5ನೇ ರ್‍ಯಾಂಕ್ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಕನ್ನಡ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಶಿಕ್ಷಣ ವಿಷಯದಲ್ಲಿ ನೂರಕ್ಕೆ ನೂರರಷ್ಟು, ಇಂಗ್ಲಿಷ್ 95 ಇತಿಹಾಸ 97 ಅಂಕ ಪಡೆದಿದ್ದಾಳೆ.