ರಥೋತ್ಸವ, ಶ್ರೀಗಳ ಪುಣ್ಯಸ್ಮರನೋತ್ಸವಮುನವಳ್ಳಿ: ಯಕ್ಕುಂಡಿ ಗ್ರಾಮದಲ್ಲಿ ಹಿಂದು ಮುಸ್ಲಿಂ ಭಾವೈಕ್ಯತೆಯ ಶ್ರೀ ಕುಮಾರೇಶ್ವರ ಸಂಸ್ಥಾನ ವಿರಕ್ತಮಠದಲ್ಲಿ ಲಿಂ. ಮುರುಗೇಂದ್ರ ಶಿವಯೋಗಿ, ಲಿಂ.ಶಿವಲಿಂಗ ಶಿವಯೋಗಿ, ಲಿಂ. ಶ್ರೀ ವಿರುಪಾಕ್ಷಿ ಶ್ರೀಗಳ ಪುಣ್ಯಸ್ಮರನೋತ್ಸವ ಮಾರ್ಚ.29 ರಿಂದ ಎಪ್ರಿಲ 9 ರವರೆಗೆ ಜರುಗಿತು. ಕರ್ತೃ ಗದ್ದುಗೆಗಳಿಗೆವಿಶೆಷ ಪೂಜೆ, ರುಧ್ರಾಭಿಷೆಕ ಗಣಾಧಾರಣೆ, ಪೂಜಾ ವಿಧಾನಗಳು ಜರುಗಿದವು. ವಿಶೇಷ ಆಹ್ವಾನಿತ ವಿವಿಧ ಮಠಾಧೀಶ್ವರ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಿತು.