ಬಡವರ ಫ್ರಿಡ್ಜ್‌ಗೆ ಭಾರೀ ಡಿಮ್ಯಾಂಡ್ಅಥಣಿ: ಆಧುನಿಕ ಜೀವನಶೈಲಿಯ ಭರಾಟೆಯಲ್ಲಿ ಮಣ್ಣಿನ ಮಡಿಕೆಗಳು ಕಣ್ಮರೆಯಾಗಿ ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್, ಫೈಬರ್ ಪಾತ್ರೆಗಳು ಮಾರುಕಟ್ಟೆ ಆವರಿಸಿವೆ. ಮಣ್ಣಿನ ಮಡಿಕೆಗೆ ಬೇಡಿಕೆ ಕುಸಿದು ಈ ಕಸಬು ನಂಬಿ ಬದುಕುತ್ತಿದ್ದ ಕುಂಬಾರರಲ್ಲಿ ಚಿಂತೆ ಆವರಿಸಿತ್ತು. ಆದರೆ, ಈ ವರ್ಷ ಮಳೆಯ ಕೊರತೆಯಿಂದ ತಾಪಮಾನ ಹೆಚ್ಚಿದ್ದು, ಬಿಸಿಲಿನ ತಾಪಕ್ಕೆ ಬಸವಳಿದಿರುವ ಜನತೆ ಮಡಿಕೆ ಮೊರೆ ಹೋಗಿದ್ದಾರೆ. ಬಡವರ ಫ್ರಿಡ್ಜ್‌ಗಳು ಎಂದೇ ಕರೆಯಲ್ಪಡುವ ಮಣ್ಣಿನ ಮಡಿಕೆಯ ವ್ಯಾಪಾರದಲ್ಲಿ ಚೇತರಿಕೆ ಕಂಡು ಬಂದಿದ್ದು, ಕುಂಬಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ.