ಏಕರೂಪೀಕರಣದ ಹೇರಿಕೆಯಿಂದ ಬಹುತ್ವದ ಆಶಯಗಳಿಗೆ ಧಕ್ಕೆದೊಡ್ಡಬಳ್ಳಾಪುರ: ಏಕರೂಪೀಕರಣದ ಹೇರಿಕೆಯ ಸಂದರ್ಭದಲ್ಲಿ ಬಹುತ್ವ ಪರಿಕಲ್ಪನೆ, ಸಮಷ್ಠಿಯ ಕೂಗು ಹೆಚ್ಚು ಮಹತ್ವವನ್ನು ಪಡೆಯುತ್ತದೆ. ಭಾಷೆ, ರಾಜಕಾರಣ, ಸಾಂಸ್ಕೃತಿಕ ವಿಚಾರಗಳ ನಿರ್ದಿಷ್ಟತೆ ಮೀರಿ ಅದು ಸಾಮೂಹಿಕ ಪ್ರಜ್ಞೆ ಎನಿಸುತ್ತದೆ ಎಂದು ಸಂಸ್ಕೃತಿ ಚಿಂತಕ ಡಾ.ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.