ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಇ-ಖಾತಾ ಪಡೆಯಲು ರೂಪಿಸಿರುವ ಇ-ಆಸ್ತಿ ವೆಬ್‌ಸೈಟ್‌ನಲ್ಲಿ ಖಾತಾ ವರ್ಗಾವಣೆ ಆಯ್ಕೆ ನೀಡದ ಕಾರಣ ಖಾತಾ ವರ್ಗಾವಣೆ (ಖಾತಾ ಟ್ರಾನ್ಸ್‌ಫರ್) ಬಯಸುವ ಆಸ್ತಿ ಮಾಲೀಕರಲ್ಲಿ ಗೊಂದಲ ಉಂಟಾಗಿದೆ.
ನಗರದಲ್ಲಿ ದೀಪಾವಳಿ ಬಳಿಕ ಕಾಫಿ-ಚಹಾ ದರ ಗ್ರಾಹಕರ ಜೇಬಿಗೆ ಕತ್ತರಿ ಹಾಕುವುದು ನಿಚ್ಚಳವಾಗಿದೆ. ಭಾರತೀಯ ಕಾಫಿ ವ್ಯಾಪಾರಿ ಸಂಘ (ಐಸಿಟಿಎ) ಕೇಜಿ ಕಾಫಿಗೆ ₹100 ವರೆಗೆ ಹೆಚ್ಚಿಸುತ್ತಿರುವುದು ಹಾಗೂ ಟೀ ಪುಡಿಯ ದರ ಸಹ ಹೆಚ್ಚಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ರಾಜ್ಯದ ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಹಿಂಗಾರು ಚುರುಕುಗೊಂಡಿದ್ದು, ಮುಂದಿನ ಮೂರ್ನಾಲ್ಕು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.