ಜಾನುವಾರು ಸಿಡಿಮದ್ದು ತಿಂದು ಮುಖ ಛಿದ್ರಕೌದಳ್ಳಿ ಗ್ರಾಮದಲ್ಲಿ ಜಾನುವಾರು ಸಿಡಿಮದ್ದು ತಿಂದು ಮುಖ ಛಿದ್ರಗೊಂಡಿರುವ ಘಟನೆ ಜರುಗಿದೆ. ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕು ದಂಡಾಧಿಕಾರಿಗಳ ಮತ್ತು ಪೊಲೀಸ್ ಇಲಾಖೆ ಅರಣ್ಯ ಇಲಾಖೆ ಪಶು ಸಂಗೋಪನ ಇಲಾಖೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಾನುವಾರುಗಳ ಉಳಿವಿಗಾಗಿ ಜಾಗೃತಿ ಸಭೆ ನಡೆದ ಬೆನ್ನಲ್ಲೇ ಗ್ರಾಮದ ವರವಲಯದ ಪೆಟ್ರೋಲ್ ಬಂಕ್ ಸಮೀಪದ ಜಮೀನೊಂದರಲ್ಲಿ ಜಾನುವಾರು ಸಿಡಿಮದ್ದು ತಿಂದು ತೀವ್ರವಾಗಿ ಗಾಯಗೊಂಡಿದೆ.