ಮಠಕ್ಕೆ ಭಕ್ತರೇ ಆಸ್ತಿ, ಚ್ಯುತಿ ಬಾರದಂತೆ ಕೆಲಸ ಮಾಡುವೆಮಠಕ್ಕೆ ಭಕ್ತರೆ ನಿಜವಾದ ಆಸ್ತಿ, ಅವರ ಆಶಯಗಳಿಗೆ ಚ್ಯುತಿ ಬಾರದಂತೆ ನಾನು ಕಾರ್ಯನಿರ್ವಹಿಸುವೆ, 2015ರಲ್ಲಿ ಚಿನ್ನದ ಪದಕ ದೊರೆತ ವೇಳೆ ನನ್ನನ್ನು ಯಾರು ಗುರುತಿಸಲಿಲ್ಲ, ಇಂದು ಪಿ.ಎಚ್‌ಡಿ ಪದವಿ ಬಂದ ವೇಳೆ ಭಕ್ತ ಸಮೂಹ ತೋರಿದ ಪ್ರೀತಿಗೆ ನಾನು ಧನ್ಯನಾಗಿದ್ದೇನೆ. ಇಂತಹ ಸಮಾರಂಭಗಳು ನಮ್ಮ ಜವಾಬ್ದಾರಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದು ಸಾಲೂರು ಮಠಾಧ್ಯಕ್ಷ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.