ರಾಜೇಂದ್ರ ಶ್ರೀಗಳು ಅಪ್ಪಟ ದೇಶಪ್ರೇಮಿ: ಪ್ರೊ.ದೇವಣ್ಣಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಭಾರತ, ಚೀನಾ ಯುದ್ಧ ನಡೆದಾಗ ತಮ್ಮ ಮಠ ಸಂಕಷ್ಟದಲ್ಲಿದ್ದರೂ ತಮ್ಮ ಚಿನ್ನದ ಕರಡಿಗೆಯನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದರು ಎಂದು ಜೆಎಸ್‌ಎಸ್ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ದೇವಣ್ಣ ಹೊಸಕೋಟೆ ತಿಳಿಸಿದರು. ಯಳಂದೂರಿನಲ್ಲಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ೧೦೯ನೇ ಜಯಂತಿಯಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು.