ಸಚಿವ ಮಹದೇವಪ್ಪರನ್ನು ಗಡಿಪಾರು ಮಾಡಿತಮ್ಮ ಪುತ್ರನನ್ನು ಗೆಲ್ಲಿಸುವುದಕೋಸ್ಕರ ಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ದಲಿತ ಮುಖಂಡರನ್ನು ಹಣ್ಣು ತರಕಾರಿ ಖರೀದಿಸುವಂತೆ ಖರೀದಿ ಮಾಡಿ, ಹಣ, ಹೆಂಡ ಹಂಚಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇವರನ್ನು ಚುನಾವಣಾ ಆಯೋಗ ಚುನಾವಣೆ ಮುಗಿಯುವವರೆಗೆ ಗಡಿಪಾರು ಮಾಡಬೇಕೆಂದು ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಒತ್ತಾಯಿಸಿದರು.