ಹುಲ್ಲೇಪುರದಲ್ಲಿ ಕರಡಿ ಪ್ರತ್ಯಕ್ಷ ರೈತರಲ್ಲಿ ಆತಂಕಹುಲ್ಲೇಪುರ ತೋಟದ ಮನೆಯ ಮುಂಭಾಗ ಕರಡಿ ಪ್ರತ್ಯಕ್ಷಗೊಂಡ ಹಿನ್ನೆಲೆ ರೈತರು ಆತಂಕಗೊಂಡಿದ್ದಾರೆ. ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹುಲ್ಲೇಪುರ ಗೋದ್ವೆ ಗುಡ್ಡದ ಬಳಿ ಸಮೀಪದಲ್ಲಿ ಬರುವ ಬೆಂಗಳೂರಿನ ನಿವಾಸಿ ಗಿರಿಧರ್ ತೋಟದ ಮನೆಯ ಮುಂಭಾಗ ಭಾನುವಾರ ಸಂಜೆ ಕರಡಿ ಪ್ರತ್ಯಕ್ಷವಾಗಿದ್ದು, ಇದರಿಂದಾಗಿ ಕಾವಲುಗಾರ ಮಂಜು ಮತ್ತು ಕುಟುಂಬದವರು ಭಯಭೀತರಾಗಿ ಸುತ್ತಮುತ್ತಲಿನ ರೈತರಿಗೆ ಮಾಹಿತಿ ನೀಡಿದ್ದಾರೆ