ನಾಲ್ಕನೇ ಶ್ರಾವಣ ಶನಿವಾರದ ಪ್ರಯುಕ್ತ ದೇವಾಲಯಗಳಿಗೆ ಹರಿದುಬಂದ ಭಕ್ತಸಾಗರನಗರ ಹೊರವಲಯದ ಸೂಲಾಲಪ್ಪ ದಿನ್ನೆಯ ಆದಿಚುಂಚನಗಿರಿ ಮಠದ ಪ್ರಸನ್ನ ವೀರಾಂಜನೇಯ ದೇಗುಲದ ಪ್ರಸನ್ನ ವೀರಾಂಜನೇಯನಿಗೆ ಬೆಣ್ಣೆ ಅಲಂಕಾರ, ನಗರದ ಕಂದವಾರ ಬಾಗಿಲ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಶ್ರೀ ವೆಂಕಟೇಶ್ವರನಿಗೆ ಪುಷ್ಟಾಲಂಕಾರ ಮಾಡಲಾಗಿತ್ತು. ತಾಲೂಕಿನ ರಂಗಸ್ಥಳದ ರಂಗನಾಥ ದೇವಾಲಯ, ಶ್ರೀನಿವಾಸ ಸಾಗರದ ಶ್ರೀನಿವಾಸ ದೇಗುಲ, ಬಾಗೇಪಲ್ಲಿ ತಾಲೂಕಿನ ಗಡದಿಂ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಜನ ಸಾಗರವೇ ಹರಿದು ಬಂದಿತು.