ಭಾರತ ಅಧ್ಯಾತ್ಮದ ಮಾರ್ಗ ತೋರುವ ತಾಯಿಜರ್ಮನಿಯ ಮ್ಯಾಕ್ಸ್‌ಮುಲ್ಲರ್ ಭಾರತಕ್ಕೆ ಬಂದು ವೇದಾಭ್ಯಾಸ ಮಾಡಿದ್ದರು. ಭಾರತ ಬದುಕಿದರೆ ಯಾರು ಸಾಯುತ್ತಾರೆ, ಭಾರತ ಸತ್ತರೆ ಯಾರು ಬದುಕುತ್ತಾರೆ ಎಂದು ನೇರವಾಗಿ ಪ್ರಶ್ನಿಸಿದ್ದರು. ಜರ್ಮನಿ ಮತ್ತು ಭಾರತಗಳು ಭೌಗೋಳಿಕವಾಗಿ ದೂರ ಇರಬಹುದು. ಆದರೆ ಅಲ್ಲಿರುವ ಎಷ್ಟೋ ಜನರಿಗೆ ಉಪನಿಷತ್, ಭಗವದ್ಗೀತೆಯ ಬಗ್ಗೆ ಭಾರತೀಯರಿಗಿಂತಲೂ ಹೆಚ್ಚು ತಿಳಿದಿದೆ.