ನಗರ ಪ್ರದೇಶದಲ್ಲಿ ಕನ್ನಡ ಭಾಷೆ ನಶಿಸುವ ಭೀತಿ: ಕಣಿವೆ ವಿನಯ್ ಕಳವಳನರಸಿಂಹರಾಜಪುರ, ಮಲೆನಾಡು ಭಾಗದ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಉಳಿದಿದೆ. ಆದರೆ, ದೊಡ್ಡ, ದೊಡ್ಡ ನಗರಗಳಲ್ಲಿ ಜನರು ಕನ್ನಡ ಮರೆಯುತ್ತಿದ್ದು ಕನ್ನಡ ಭಾಷೆ ನಶಿಸಿ ಹೋಗುವ ಭೀತಿಯಲ್ಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಾಂಸ್ಕೃತಿಕ ರಾಯಭಾರಿ ಕಣಿವೆ ವಿನಯ್ ಕಳವಳ ವ್ಯಕ್ತಪಡಿಸಿದರು.