ದಸರಾ ನಾಡಹಬ್ಬಕ್ಕೆ ಮೆರುಗು ನೀಡುವ ಪ್ರಖ್ಯಾತ ಜಾನಪದ ಕ್ರೀಡೆಗಳುತರೀಕೆರೆ, ನಾಡಹಬ್ಬ ದಸರಾದಲ್ಲಿ ವಿಜಯ ದಶಮಿ ಆಯುಧಪೂಜೆ ಹಬ್ಬಗಳು ಬಂತೆಂದರೆ ತರೀಕೆರೆ ಪಟ್ಟಣದ ಜನತೆಗೆ ಸಡಗರವೋ ಸಡಗರ, ಕಾರಣ ಹಬ್ಬದ ದಿನಗಳಲ್ಲಿ ಊರಿನ ಗ್ರಾಮ ದೇವತೆಗಳಿಗೆ ಪ್ರತಿ ನಿತ್ಯ ವಿಶೇಷ ಅಲಂಕಾರ, ಪೂಜೆ ವಿಜಯದಶಮಿಯಂದು ಊರಿನ ಗ್ರಾಮ ದೇವತೆಗೆ ಸಾಲು ಸಾಲು ಅದ್ಧೂರಿ ಮೆರವಣಿಗೆ, ಅಂಬು ಹೊಡೆಯುವ ಕಾರ್ಯಕ್ರಮ ಇದಕ್ಕೆಲ್ಲಾ ಮೆರಗು ಕೊಡುವಂತೆ ಯುವ ಕ್ರೀಡಾಭಿಮಾನಿಗಳ ಅಚ್ಚುಮೆಚ್ಚಾದ ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ರಾಜ್ಯ ಮಟ್ಟದ ಬಯಲು ಜಂಗಿ ಕುಸ್ತಿ ಸ್ಪರ್ಧೆಗಳು.