ಶೃಂಗೇರಿ ಶಾರದೆಗೆ ಸರ್ವಾಭರಣ ಭೂಷಿತವಾದ ಮೋಹಿನಿ ಅಲಂಕಾರಶೃಂಗೇರಿ, ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಪೀಠದ ಅಧಿದೇವತೆ ಶೃಂಗೇರಿ ಶಾರದೆಗೆ ಬ್ರಾಹ್ಮಿ ಕೌಮಾರಿ, ವೈಷ್ಣವಿಯಲಂಕಾರದ ನಂತರ ಮಂಗಳವಾರ ಮೋಹಿನಿ ಅಲಂಕಾರ ಮಾಡಲಾಗಿತ್ತು. ಕೈಯಲ್ಲಿ ಅಮೃತ ಕಲಶ ಹಿಡಿದು ತನ್ನ ರೂಪ ಲಾವಣ್ಯಗಳಿಂದ ದುಷ್ಟರು, ಕ್ರೂರರು , ರಾಕ್ಷಸರನ್ನು ಮೋಹಗೊಳಿಸಿ ದೇವತೆಗಳಿಗೆ ಅಮೃತ ಲಭಿಸುವಂತೆ ಮಾಡಿದ ಜಗನ್ಮಾತೆ ರೂಪದಲ್ಲಿ ಶಾರದೆ ಕಂಗೊಳಿಸಿದಳು.