ಮಳೆಯ ನಡುವೆಯೂ ಕಳೆಗಟ್ಟಿದ ದಸರಾ ಉತ್ಸವಶೃಂಗೇರಿ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಮಹೋತ್ಸವದ ಆರಂಭದಿಂದಲೂ ಸುರಿಯುತ್ತಿರುವ ಮಳೆ ಗುರುವಾರವೂ ಮತ್ತೆ ಎಂದಿನಂತೆ ಅಬ್ಬರಿಸಿತು. ಆದರೆ ಭಕ್ತರ ಸಂಖ್ಯೆ ಮಾತ್ರ ಕ್ಷೀಣಿಸಿರಲಿಲ್ಲ. ಶ್ರೀ ಮಠದ ಆವರಣ, ಶ್ರೀ ಶಾರದಾಂಬಾ ದೇವಾಲಯ ಸಹಿತ ಎಲ್ಲೆಡೆ ಭಕ್ತರ ದಂಡೇ ನೆರೆದಿತ್ತು.