ಅಕ್ರಮವಾಗಿ ಕಡಿದ ಸಾಗುವಾನಿ ಮರ ವಶ: ಇಬ್ಬರ ಬಂಧನನರಸಿಂಹರಾಜಪುರ, ತಾಲೂಕಿನ ಬಾಳೆಹೊನ್ನೂರು ಹೋಬಳಿಯ ದಾವಣ ಗ್ರಾಮದಲ್ಲಿ ಬರುವ ಮೇಗರಮಕ್ಕಿ ಮೀಸಲು ಅರಣ್ಯದಲ್ಲಿ ಗುರುವಾರ ರಾತ್ರಿ ಅಕ್ರಮವಾಗಿ ಸಾಗುವಾನಿ ಮರ ಕಡಿದು ಅದನ್ನು ವಾಹನದಲ್ಲಿ ಸಾಗಿಸಲು ಯತ್ನಿಸುತ್ತಿದ್ದಾಗ ಚಿಕ್ಕ ಅಗ್ರಹಾರವಲಯ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ಮಾಡಿ ಸಾಗುವಾನಿ ತುಂಡು ಹಾಗೂ ವಾಹನ ವಶಪಡಿಸಿಕೊಂಡು 8 ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ.