ನಿತ್ಯ ಜೀವನದಲ್ಲಿ ಗಣಿತ ಪ್ರಮುಖ: ಎಚ್.ಇ.ದಿವಾಕರನರಸಿಂಹರಾಜಪುರ, ನಮ್ಮ ನಿತ್ಯ ಜೀವನದಲ್ಲಿ ಗಣಿತವೂ ಪ್ರಮುಖವಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಇ.ದಿವಾಕರ ಹೇಳಿದರು.ತಾಲೂಕಿನ ಸೀತೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸೀತೂರು ಗ್ರಾಮ ಪಂಚಾಯಿತಿಯ 8 ಶಾಲೆಗಳ ಮಕ್ಕಳಿಗಾಗಿ ಗಣಿತ ಕಲಿಕಾ ಆಂದೋಲನದಡಿ ನಡೆದ ಗಣಿತ ಸ್ಪರ್ಧೆಯಲ್ಲಿ ಮಾತನಾಡಿ, ಗಣಿತ ಎಂಬುದು ಕೇವಲ ಪಾಠವಲ್ಲ, ಕಲಿಕೆಯಲ್ಲ, ಅದು ಜೀವನದ ಒಂದು ಅಂಗ. ಎಲ್ಲಾ ರೀತಿಯ ವ್ಯವಹಾರ ಮಾಡಲು ಗಣಿತ ಜ್ಞಾನ ಹೊಂದಿರಲೇ ಬೇಕು. ಮಕ್ಕಳು ವಿಜ್ಞಾನ -ಗಣಿತದಲ್ಲಿ ಹೆಚ್ಚಿನ ಆಸಕ್ತಿ ತೋರಿದರೆ ಅವರ ಭವಿಷ್ಯ ಉಜ್ವಲವಾಗಲಿದೆ. ನಿಮ್ಮ ಮುಂದಿನ ಜೀವನದಲ್ಲಿ ಆರ್ಥಿಕ ತಜ್ಞ ಅಬ್ದುಲ್ ಕಲಾಂ ರೀತಿ ಬೆಳವಣಿಗೆ ಹೊಂದಬಹುದು ಎಂದರು.