ದತ್ತ ಜಯಂತಿ ಉತ್ಸವಕ್ಕೆ ಶಾಂತಿಯುತ ತೆರೆವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಮೂರು ದಿನಗಳ ಕಾಲ ದತ್ತಪೀಠದಲ್ಲಿ ಹಮ್ಮಿಕೊಂಡಿದ್ದ ದತ್ತ ಜಯಂತಿ ಮಂಗಳವಾರ ವಿದ್ಯುಕ್ತ ತೆರೆಕಂಡಿತು. ನಿರೀಕ್ಷೆಯಲ್ಲಿ ಭಕ್ತರು, ದತ್ತಮಾಲಾಧಾರಿಗಳು ಆಗಮಿಸದೆ ನೀರಸವಾಗಿತ್ತು.ಎಂದಿನಂತೆ ಜಿಲ್ಲಾಡಳಿತ ಹೆಚ್ಚಿನ ಬಂದೋಬಸ್ತ ವ್ಯವಸ್ಥೆ ಮಾಡಿತ್ತು ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ದತ್ತಮಾಲಾಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.