ವಾತಾವರಣದ ಏರುಪೇರು, ಬಿರು ಬೇಸಿಗೆ: ಹವಾಮಾವ ವೈಪರೀತ್ಯಮಲೆನಾಡು-ಬಯಲು ಸೀಮೆಯ ಮಿಶ್ರ ಭೂಭಾಗವನ್ನು ಹೊಂದಿರುವ ತರೀಕೆರೆ ಮತ್ತು ಅಜ್ಜಂಪುರ ತಾಲೂಕು ಬಹಳ ಹಿಂದಿನಿಂದಲೂ ವಿವಿಧ ಬಗೆಯ ಮಾವು ಬೆಳೆಗಳಿಗೆ ಖ್ಯಾತಿ ಪದೆದಿದೆ. ರಾಜ್ಯ ಮತ್ತು ಹೊರ ರಾಜ್ಯಗಳ ಮಾವಿನ ಮಾರುಕಟ್ಟೆಯಲ್ಲಿ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನಲ್ಲಿ ಬೆಳೆಯುವ ರುಚಿಕಟ್ಟಾದ , ಅಷ್ಟೇ ಗುಣಮಟ್ಟದ ಹಾಗೂ ಆರೋಗ್ಯಕರ ಮಾವಿಗೆ ಬಹಳ ಬೇಡಿಕೆ ಇದೆ ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಇಳುವರಿ ತೀವ್ರವಾಗಿ ಕುಸಿದಿದೆ.