ವಿದ್ಯೆ ಯಾರೂ ಕದಿಯಲಾಗದ ಸಂಪತ್ತು: ಗದ್ದೇಮನೆ ವಿಶ್ವನಾಥ್ ಅಭಿಮತನರಸಿಂಹರಾಜಪುರ, ವಿದ್ಯೆ ಯಾರೂ ಕದಿಯಲಾಗದ ಸಂಪತ್ತು ಎಂದು ಬೆಂಗಳೂರಿನ ಉದ್ಯಮಿ, ದಾನಿ ಗದ್ದೇಮನೆ ವಿಶ್ವನಾಥ ತಿಳಿಸಿದರು.ಶುಕ್ರವಾರ ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 79 ನೇ ಸ್ವಾತಂತ್ರ್ಯ ದಿನಾಚರಣೆ, ದಾನಿ ವಿಶ್ವನಾಥ್ ಅವರಿಗೆ ಸನ್ಮಾನ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.